26/04/2024
ಇಂದು 26/4/2024 ,ಕೇಂದ್ರ ಸರಕಾರದ ಗದ್ದುಗೆಗಾಗಿ
ಜನಾಭಿಪ್ರಾಯ ಗಳಿಸಲು ಕರ್ನಾಟಕದಲ್ಲಿ ಲೋಕಸಭಾ ಚುನಾವಣೆ ನಡೆಯುತ್ತಿದೆ.
ಪ್ರಸ್ತುತ ಗದ್ಸುಗೆಯನ್ನು ಏರಿ ಕುಳಿತ ಮಹಾಪ್ರಭುಗಳು ಕಳೆದ ಹತ್ತು ವರುಷಗಳಿಂದ ಈ ದೇಶವನ್ನು ಆಡಳಿತ ನಡೆಸುತ್ತಿದ್ದಾರೆ.
ಕೇಂದ್ರದಲ್ಲಿ ಗದ್ದುಗೆಯನ್ನು ಆಕ್ರಮಿಸುವ ಪೂರ್ವದಲ್ಲಿ 2001 ರಿಂದ ನಿರಂತರವಾಗಿ ಗುಜರಾತನ್ನು ಆಡಳಿತ ನಡೆಸುತ್ತಾ ಬಂದಿದ್ದರು.
ಗುಜರಾತಿಗಳು ಪಕ್ಕಾ ವ್ಯವಹಾರಸ್ಥರು.
ಗುಜರಾತಿನಿಂದ ಮುಂಬಯಿಗೆ ಶತಮಾನಗಳ ಹಿಂದೆಯೇ ಮುಂಬಯಿಯಲ್ಲಿ ನೆಲೆಯೂರಿ , ವ್ಯವಹಾರ ಮಾಡಿ ತನ್ನ ಮಾತೃ ರಾಜ್ಯದ ಸಂಪರ್ಕ ದಲ್ಲಿ ಇದ್ದರು.
ಮತ್ತೊಂದು ಕಡೆ ಮರಾಠಾ ನಾಯಕ ಬಾಳ ಸಾಹೇಬ್ ಠಾಕ್ರೆ ಇವರು ಶಿವಸೇನೆ ಎಂಬ ಸಂಘಟನೆಯನ್ನು ಕಟ್ಟಿ, ಮರಾಠಿ ಗರಲ್ಲಿ ಭಾಷಾ ಪ್ರೇಮದ ಅಮಲು ತುಂಬಿಸಿ ಅನ್ಯ ರಾಜ್ಯದವರನ್ನು ಹೊರದಬ್ಬಲು ಮರಾಠಿಗರಿಗೆ ಕರೆ ನೀಡಿ, ಮರಾಠಿಗರು ಮಾತ್ರ ಮಹಾರಾಷ್ಟ್ರದಲ್ಲಿ ಅಧಿಕಾರ ನಡೆಸಬೇಕೆಂದು ಕರೆ ನೀಡಿ ಅಧಿಕಾರ ಪಡೆಯಲು ಯಶಸ್ವಿಯಾಗಿದ್ದರು.
1990 ರ ದಶಕದಲ್ಲಿ ಗುಜರಾತಿಗಳನ್ನು ಮಹಾರಾಷ್ಟ್ರದಿಂದ ಹೊರದಬ್ಬ ಬೇಕು ಎನ್ನುವ ಠಾಕ್ರೆಯವರ ಕಾರೆ ಹಿಂಸೆಗೆ ತಿರುಗಿ, ಪಕ್ಕಾ ವ್ಯವಹಾರಸ್ಥರಾಗಿದ್ದ ಗುಜರಾತಿಗಳು ಹಿಂಸೆಗೆ ಹೆದರಿ ತಮ್ಮ ಮಾತೃ ರಾಜ್ಯಕ್ಕೆ ಮರಳಿದರು.
ಮೂಲತಃ ಶ್ರೀಮಂತರಾಗಿದ್ದು ಗುಜರಾತಿಗಳು, ಮುಂಬಯಿಯಲ್ಲಿ ಪಡೆದಿದ್ದ ಅನುಭವವನ್ನು ಗುಜರಾತಿನ ಬೆಳವಣಿಗೆ ವ್ಯಯಿಸಿದರು.
ಗುಜರಾತಿನ ಅಭಿವೃದ್ಧಿಗೆ ತಮ್ಮ ಹಣವನ್ನು ವ್ಯಯಿಸಿದರು.
ಆ ಪ್ರಯತ್ನದ ಫಲವಾಗಿ 2009 -2010 ರ ಹೊತ್ತಿಗೆ ಗುಜರಾತ್ ವ್ಯಾಪಾರ ಕ್ಷೇತ್ರದಲ್ಲಿ ಅಭಿವೃದ್ಧಿಯನ್ನು ಕಾಣಲು ಆರಂಭಿಸಿತು( ಶಿಕ್ಷಣ ಕ್ಷೇತ್ರದಲ್ಲಿ ಈಗಲೂ ಶೂನ್ಯದಲ್ಲಿ ಇದೆ)
ಈ ಗುಜರಾತಿಗರು ಪ್ರಯತ್ನದ ಫಲವನ್ನು ಯಾವುದೇ ಕೆಲಸಮಾಡದ ಆಗಿನ ಗುಜರಾತಿನ ಮುಖ್ಯಮಂತ್ರಿ ತನ್ನ ಸರಕಾರದ ಅಭಿವೃದ್ಧಿ ಎಂದು ಘೋಷಿಸಿಕೊಂಡರು.
ಆ ಮುಖ್ಯಮಂತ್ರಿ ಬೇರಾರೂ ಅಲ್ಲ ನಮ್ಮ ಇಂದಿನ ಪ್ರಧಾನಿ ನರೇಂದ್ರ ಮೋದಿ ಸಾಹೇಬರು.
ಮಾದ್ಯಮದವರನ್ನು ಖರೀದಿಸಿ ಇದನ್ನು ಗುಜರಾತ್ ಮಾಡೆಲ್ ಎಂದು ಪ್ರಚಾರ ಮಾಡಿ ಕೇಂದ್ರ ಸರಕಾರದತ್ತ ಅಧಿಕಾರ ದ ಗದ್ದುಗೆಗೆ ಹೆಜ್ಜೆ ಇಟ್ಟರು.
ಆಧುನಿಕ ಸಂಪರ್ಕ ಸಾಧನ , ವಾಟ್ಸಾಪ್ ಯೂನಿವರ್ಸಿಟಿ ಗಳನ್ನು ಸ್ಥಾಪಿಸಿ ಆ ಮೂಲಕ ಮಹಾನ್ ವಿದ್ಯಾವಂತರನ್ನೆಲ್ಲಾ ಅವಿದ್ಯಾವಂತರನ್ನಾಗಿ ಬಿಂಬಿಸಿದರು.
ಇದನ್ನೆಲ್ಲಾ ಜನ ನಂಬಿದರು.
ಇನ್ನೊಬ್ಬರ ಮೇಲೆ ಸುಳ್ಳನ್ನು ಆರೋಪಿಸುತ್ತಾ ತನ್ನ ವಿದ್ಯಾಭ್ಯಾಸದ ಪದವಿಯ ಬಗ್ಗೆ ಹಲವು ಒಂದೊದು ಕಡೆ ಒಂದೊಂದು ಪದವಿಯನ್ನು ಸೃಶ್ರಿಸುತ್ತಾ ಹೋದರು.
ಮೋದಿಯವರೇ ಹೇಳಿದ ಪ್ರಕಾರ ಅವರ ವಿದ್ಯಾರ್ಹತೆ ಹೀಗಿದೆ:
1. ವಿದ್ಯಾಭ್ಯಾಸ ಇಲ್ಲ: ಎಳೆಯ ಮಗುವಾಗಿದ್ದಾಗ ಯಾವುದೋ ಅಸ್ತಿತ್ವದಲ್ಲಿ ಇಲ್ಲದ ರೈಲ್ವೇ ಸ್ಟೇಷನ್ ನಲ್ಲಿ ಚಾ ಮಾರುತ್ತಿದ್ದೆ. ಆಗ ಪಾಕಿಸ್ತಾನಕ್ಕೆ ಯುದ್ಧಸನ್ನದ್ಧರಾಗಿ ರೈಲಿನಲ್ಲಿ ಹೋಗುತ್ತಿದ್ದ ಸೈನಿಕರಿಗೆ ಚಾ ನೀಡಿದ್ದೆ. (ಯಾವ ವರ್ಷ, ಯಾವ ಗಡಿ ತಕರಾರಿನ ಬಗ್ಗೆ ಯುದ್ಧ ಯಾವುದೂ ದಾಖಲೆ ಇಲ್ಲ)
2. ತಾನು ಎಳೆಯ ಮಗುವಾಗಿದ್ದಾಗಲೇ ಮನೆಯನ್ನು ತೊರೆದು ಮೂವತ್ತು ವರುಷ ಸನ್ಯಾಸಿಯಾಗಿ ಅಲೆಯುತ್ತಿದ್ದೆ(ಯಾವ ಸನ್ಯಾಸಿಯ ಅಡಿಯಲ್ಲಿ ದೀಕ್ಷೆ ಪಡೆದಿದ್ದಾರೋ? ದೇವರೇ ಬಲ್ಲ)
3. ತಾನು ಹತ್ತನೇ ತರಗತಿಯ ವರೆಗೂ ಓದಿಲ್ಲ: ಈ ವಿಚಾರವನ್ನು ಸ್ವತಃ ಮೋದಿಯವರೇ ತನ್ನ ಸಂದರ್ಶನದ ಸಮಯ ಮಾಧ್ಯಮಕ್ಕೆ ಹಾಗೂ ಭಾಷಣವೊಂದರಲ್ಲಿ ಶಾಲಾ ಮಕ್ಕಳ ಪ್ರಶ್ನೆಗೆ ಉತ್ತರಿಸುತ್ತಾ ಹೇಳಿದ್ದು)
4. ತಾನು Engineer ಪದವೀಧರ: ಹಲವು ಮಾಧ್ಯಮಗಳಲ್ಲಿ ಬಹಳ ಹಿಂದೆ ಸಂದೇಶನಗಳನ್ನು ನೀಡುವ ಸಮಯ ನೀಡಿದ್ದ ಹೇಳಿಕೆ
5. ತಾನು ಪದವೀಧರ: ಪ್ರಧಾನ ಮಂತ್ರಿ ಆಗುವ ಪೂರ್ವದಲ್ಲಿ ಚುನಾವಣಾ ಅಫಿಡವಿಟ್ ನಲ್ಲಿ ನೀಡಿದ್ದ ಹೇಳಿಕೆ
6. MA (Politics) : ಈ ಪದವಿಯನ್ನು ನಮ್ಮ ಮೋದಿಯವರು ಪ್ರಧಾನಿ ಆದ ಬಳಿಕ ಸಾರ್ವಜನಿಕರು ಪ್ರಶ್ನಿಸಿದಾಗ ನೀಡಿರುವ ಹೇಳಿಕೆ
ಇಷ್ಟೇ ಅಲ್ಲ ತಾನು ಬ್ರಹ್ಮಚಾರಿ ಎಂದೂ ಹೇಳಿಕೊಂಡು ತಿರುಗಾಡಿದ್ದ ಈವ್ಯಕ್ತಿಗೆ ಬಹಳ ಹಿಂದೆಯೇ ಮದುವ್ವಾಗಿದೆ ಯಂತೆ 🥲!
ಎಳೆಯ ಪ್ರಾಯದಲ್ಲಿ ಮೊಸಳೆ ಹಿಡಿದಿದ್ದರಂತೆ.
ಬಾಂಗ್ಲಾ ದೇಶದ ಯುದ್ಧದ ಸಮಯದಲ್ಲಿ ಸೈನಿಕರ ಜೊತೆ ಯುದ್ಧ ಮಾಡಿದ್ದರಂತೆ
ಹೀಗೆ ಅಂತೆ ಕಂತೆಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.
ಒಂದು ಸುಳ್ಳನ್ನು ಸತ್ಯವೆಂದು ಸಾಭೀತು ಪಡಿಸಲು ಇನ್ನೊಂದು ಸುಳ್ಳು
ಸುಳ್ಳನ್ನು ಜನ ನಂಬುವಂತೆ ಮಾಡಲುವಿವಿಧ ವೇಷ
ತನ್ನ ಅಧಿಕಾರಕ್ಕೆ ಕುತ್ತು ಬರುತ್ತದೆ ಎಂದು ಗೊತ್ತಾದಾಗ
ಹುದ್ದೆಗೆ ಅರ್ಹವಲ್ಲದ ಭಾಷೆ
ಎಲ್ಲಿಯವರೆಗೆ ಎಂದರೆ
ಮಹಿಳೆಯರ ಮಾಂಗಲ್ಯ ಸೂತ್ರದ ವರೆಗೆ.
ಮೋದಿಯವರು ನಿರಂತರ ಸುಳ್ಳಿನ ಸಾಮ್ರಾಜ್ಯದಲ್ಲಿ ನಡೆಯುತ್ತಿದ್ದಾರೆ.
ಈ ಸಂದರ್ಭದಲ್ಲಿ ಈ ಕೆಳಗಿನ ಹಾಡು ಬಹಳ ಸೂಕ್ತ ಅನ್ನಿಸಿತು:
ಕಳಬೇಡ ಕೊಲಬೇಡ
ಹುಸಿಯ ನುಡಿಯ ಬೇಡ
ತನ್ನ ಬಣ್ಣಿಸ ಬೇಡ…….
ನಮಗೆ ಬೇಕಾಗಿದೆ
ಸತ್ಯವಂತ
ವಿದ್ಯಾವಂತ
ಸನ್ನಡತೆಯ
ಸಹಬಾಳ್ವೆಯ ಪೋಷಿಸುವ
ನಾಯಕ
ಹಾಗಾಗಿ ಕಳೆದ ಹತ್ತು ವರುಷಗಳಿಂದ ಸುಳ್ಳಿನ ಸಾಮ್ರಾಜ್ಯ ನಡೆಸುತ್ತಾ ಬಂದಿರುವ ಆ ಮಹಾನ್ ಸುಳ್ಳುಕೋರನನ್ನು ಪದಚ್ಯುತು ಗೊಳಿಸಲು
ನಮ್ಮ ತೋರ್ ಬೆರಳ ಶಸ್ತ್ರ ವನ್ನು ಪ್ರಯೋಗಿಸಿ
ಹೊಸ ನಾಯಕನಿಗೆ ಪಟ್ಟಾಭಿಷೇಕ ಮಾಡುವ
ಬನ್ನಿ
ಮತದಾನ ಮಾಡುವ