28/01/2022
ಇಂದು *ಪಂಜಾಬ ಕೇಸರಿ*
ಎಂದೇ ಹೆಸರು ವಾಸಿಯಾಗಿರುವ *ಲಾಲಾ ಲಜಪತ ರಾಯ್* ರವರ ಜನ್ಮದಿನ, ಈ *ಮಹಾನ್ ಚೇತನಕ್ಕೆ ಅನಂತ ಕೋಟಿ ನಮನ...*🙏
ದೇಶದ ಪ್ರಖ್ಯಾತ ತ್ರಿಮೂರ್ತಿಗಳಾದ *ಲಾಲ್ ಬಾಲ್ ಪಾಲ್* ಎಂದೇ ಪ್ರಸಿದ್ದರಾದವರಲ್ಲಿ ಒಬ್ಬರು. ಸ್ವಾತಂತ್ರ್ಯಕ್ಕಾಗಿ ತನ್ನ ಪ್ರಾಣವನ್ನೇ ತಾಯಿ ಭಾರತಿಗೆ ಅರ್ಪಿಸಿದ ಮಹಾನ್ ಚೇತನ .
ಪಂಜಾಬ್ ಮೋಗಾ ಜಿಲ್ಲೆಯ ಧುಡಿಕೆ ಎಂಬಲ್ಲಿ ಜನವರಿ 28 ರಂದು ಜನಿಸಿದ ಲಾಲಾಗೆ ದೇಶಭಕ್ತಿ ರಕ್ತದಲ್ಲಿಯೆ ಬಂದಿತ್ತು.
1928 ರಲ್ಲಿ ಸೈಮನ್ ಭಾರತಕ್ಕೆ ಆಗಮಿಸುವ ವಿಚಾರವನ್ನು ತಿಳಿದು, ಅನೇಕ ಕ್ರಾಂತಿಕಾರಿ ಯುವಕರನ್ನು ಒಟ್ಟುಗೂಡಿಸಿ ಆತನನ್ನು ಭಾರತದ ನೆಲಕ್ಕೆ ಕಾಲಿಡದಂತೆ ದೊಡ್ಡ ಪ್ರತಿಭಟನೆಯನ್ನು ಹಮ್ಮಿಕೊಂಡರು. ಬ್ರಿಟೀಷರು ಈ ಪ್ರತಿಭಟನೆಯಲ್ಲಿ ಲಾಠಿ ಚಾರ್ಜ್ ಮಾಡಿದಾಗ ಲಾಲಾಗೆ ಏಟು ಬಿತ್ತು.
ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ನವೆಂಬರ್ 17, 1928 ರಂದು ಅವರು ಕೊನೆಯುಸಿರೆಳೆದರು.
ಇದೇ ಸಂದರ್ಭದಲ್ಲಿ ಲಾಲಾ ಲಜಪತ್ ರಾಯ್ ಅವರು, *ಇಂದು ನನಗೆ ಬಿದ್ದ ಏಟುಗಳು ಭಾರತದಲ್ಲಿ* *ಬ್ರಿಟೀಷರ ಆಡಳಿತದ ಶವಪೆಟ್ಟಿಗೆಗೆ ಹೊಡೆಯುವ ಕೊನೆಯ ಮೊಳೆಗಳು'* ಎಂದಿದ್ದರು.
ಅಲ್ಲಿಂದ ಮೊದಲುಗೊಂಡು ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕ್ರಾಂತಿಯ ಹೊಸ ಶಕೆ ಆರಂಭವಾಯಿತು.