ಮಂಜುಗೌಡ

ಮಂಜುಗೌಡ Contact information, map and directions, contact form, opening hours, services, ratings, photos, videos and announcements from ಮಂಜುಗೌಡ, Lawyer & Law Firm, MANJUNATHA C GOWDA, Bangalore.

ವಿಶ್ವ ಗುಬ್ಬಚ್ಚಿ ದಿನದ ಶುಭಾಷಯಗಳು😍ಜನವಸತಿ ಪ್ರದೇಶಗಳಲ್ಲಿ ಮಾತ್ರ ವಾಸಿಸುವ ಗುಬ್ಬಿಚ್ಚಿಗಳು ಇಂದು ನಮ್ಮ ಆಧುನಿಕತೆಯ ಹೊಡೆತಕ್ಕೆ ಸಿಕ್ಕು ಅಪ್ಪ...
20/03/2026

ವಿಶ್ವ ಗುಬ್ಬಚ್ಚಿ ದಿನದ ಶುಭಾಷಯಗಳು😍
ಜನವಸತಿ ಪ್ರದೇಶಗಳಲ್ಲಿ ಮಾತ್ರ ವಾಸಿಸುವ ಗುಬ್ಬಿಚ್ಚಿಗಳು ಇಂದು ನಮ್ಮ ಆಧುನಿಕತೆಯ ಹೊಡೆತಕ್ಕೆ ಸಿಕ್ಕು ಅಪ್ಪಚ್ಚಿಯಾಗಿವೆ.
ಅವುಗಳ ಸಂತತಿಯ ಉಳಿವಿಗೆ ಕಾರ್ಯಪ್ರವೃತ್ತರಾಗೋಣಾ!!

ಎಲ್ಲರಿಗೂ ನೂತನ ಹಿಂದೂ ವರ್ಷ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು. ಹೊಸ ವರುಷದಲ್ಲಿ ನಾಡಿನ ಜನರಿಗೆ ದೇವರು ಸಂತಸ, ನೆಮ್ಮದಿ, ಯಶಸ್ಸು, ಕೀರ್ತಿ ...
18/03/2026

ಎಲ್ಲರಿಗೂ ನೂತನ ಹಿಂದೂ ವರ್ಷ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು. ಹೊಸ ವರುಷದಲ್ಲಿ ನಾಡಿನ ಜನರಿಗೆ ದೇವರು ಸಂತಸ, ನೆಮ್ಮದಿ, ಯಶಸ್ಸು, ಕೀರ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಬೇವು-ಬೆಲ್ಲ ಸವಿಯುವ ಈ ಶುಭ ಗಳಿಗೆಯು ಎಲ್ಲರ ಬದುಕಿನಲ್ಲಿ ನವ ಚೈತನ್ಯ ಹಾಗೂ ಹೊಸತನ ತರಲಿ. #ಮಂಜುನಾಥ್ ಸಿ ಗೌಡ ವಕೀಲರು

#ಯುಗಾದಿ2026

ಕನ್ನಡದ ಖ್ಯಾತ ಕವಿ ಪಂಜೆ ಮಂಗೇಶರಾಯರ ಜಯಂತಿಯಂದು ಅವರಿಗೆ ನನ್ನ ಅಕ್ಷರ ನಮನಗಳು.ಕವಿಶಿಷ್ಯ ಕಾವ್ಯನಾಮದಿಂದ ಖ್ಯಾತರಾಗಿದ್ದ ಪಂಜೆ ಮಂಗೇಶರಾವ್ ಅವರ...
22/02/2026

ಕನ್ನಡದ ಖ್ಯಾತ ಕವಿ ಪಂಜೆ ಮಂಗೇಶರಾಯರ ಜಯಂತಿಯಂದು ಅವರಿಗೆ ನನ್ನ ಅಕ್ಷರ ನಮನಗಳು.

ಕವಿಶಿಷ್ಯ ಕಾವ್ಯನಾಮದಿಂದ ಖ್ಯಾತರಾಗಿದ್ದ ಪಂಜೆ ಮಂಗೇಶರಾವ್ ಅವರ ನವಿರಾದ ಬರಹ, ವಿಶೇಷವಾಗಿ ಮಕ್ಕಳ ಸಾಹಿತ್ಯಕ್ಕೆ ನೀಡಿದ ಕೊಡುಗೆಯನ್ನು ಕರುನಾಡು ಸದಾ ಸ್ಮರಿಸುತ್ತದೆ.

ಭಾರತೀಯ ತಟ ರಕ್ಷಣಾ ಪಡೆ ದಿನ.ದೇಶದ ಕರಾವಳಿಯನ್ನು ಅತ್ಯಂತ ಎಚ್ಚರಿಕೆಯಿಂದ ರಕ್ಷಣೆ ಮಾಡುತ್ತಿರುವ ಎಲ್ಲಾ ಭಾರತೀಯ ತಟ ರಕ್ಷಣಾ ಪಡೆಯ ವೀರಯೋಧರಿಗೆ ...
01/02/2026

ಭಾರತೀಯ ತಟ ರಕ್ಷಣಾ ಪಡೆ ದಿನ.

ದೇಶದ ಕರಾವಳಿಯನ್ನು ಅತ್ಯಂತ ಎಚ್ಚರಿಕೆಯಿಂದ ರಕ್ಷಣೆ ಮಾಡುತ್ತಿರುವ ಎಲ್ಲಾ ಭಾರತೀಯ ತಟ ರಕ್ಷಣಾ ಪಡೆಯ ವೀರಯೋಧರಿಗೆ ಗೌರವ ನಮನಗಳನ್ನು ಸಲ್ಲಿಸೋಣ.

ಭಾರತದ ಕಡಲ ಸುರಕ್ಷತೆಯನ್ನು ಬದ್ಧತೆಯಿಂದ ಸಂರಕ್ಷಣೆ ಮಾಡುತ್ತಿರುವ ತಟ ರಕ್ಷಣಾ ಪಡೆಯ ಯೋಧರ ಕಾರ್ಯ ಸದಾ ಶ್ಲಾಘನೀಯ.

ಸತ್ಯ, ಶಾಂತಿ, ಅಹಿಂಸೆಗಳನ್ನೇ ಬದುಕಿ, ನನ್ನ ಜೀವನವೇ ನನ್ನ ಸಂದೇಶವೆಂದು ಸಾರಿದ ಮಹಾನ್ ಸಂತ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಪುಣ್ಯಸ್ಮರಣೆಯಂದು...
30/01/2026

ಸತ್ಯ, ಶಾಂತಿ, ಅಹಿಂಸೆಗಳನ್ನೇ ಬದುಕಿ, ನನ್ನ ಜೀವನವೇ ನನ್ನ ಸಂದೇಶವೆಂದು ಸಾರಿದ ಮಹಾನ್ ಸಂತ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಪುಣ್ಯಸ್ಮರಣೆಯಂದು ಭಾವಪೂರ್ಣ ನಮನಗಳು. ಬಾಪೂಜಿ ಅವರ ತತ್ವ ಚಿಂತನೆಗಳು, ಸತ್ಯದ ಸಿದ್ಧಾಂತಗಳು ಇಂದಿಗೂ ಪ್ರಸ್ತತವಾಗಿದ್ದು, ಎಲ್ಲರಿಗೂ ದಾರಿ ದೀಪವಾಗಿವೆ.
ಇಂದು ರಾಷ್ಟ್ರೀಯ ಹುತಾತ್ಮರ ದಿನವಾಗಿದ್ದು, ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ಎಲ್ಲಾ ಮಹನೀಯರನ್ನು ಕೃತಜ್ಞತೆಯಿಂದ ಸ್ಮರಿಸೋಣ.

ನಮ್ಮ ಸಂವಿಧಾನದ ಅನುಷ್ಠಾನಕ್ಕೆ ಕಾರಣರಾದ ಮತ್ತು ಭಾರತವನ್ನು ಬಲಿಷ್ಠ 'ಗಣರಾಜ್ಯ'ವಾಗಿ ಪರಿವರ್ತಿಸಿದ ಮಹಾನ್ ನಾಯಕರಿಗೆ ವಂದನೆಗಳು.ಸಮಸ್ತ ಭಾರತೀಯ...
25/01/2026

ನಮ್ಮ ಸಂವಿಧಾನದ ಅನುಷ್ಠಾನಕ್ಕೆ ಕಾರಣರಾದ ಮತ್ತು ಭಾರತವನ್ನು ಬಲಿಷ್ಠ 'ಗಣರಾಜ್ಯ'ವಾಗಿ ಪರಿವರ್ತಿಸಿದ ಮಹಾನ್ ನಾಯಕರಿಗೆ ವಂದನೆಗಳು.
ಸಮಸ್ತ ಭಾರತೀಯರಿಗೆ
77ನೇ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು

ನಮ್ಮ ಭಾರತವು  ವಿವಿಧ ಸಂಸ್ಕೃತಿ ಮತ್ತು ಭಾಷೆಗಳ ನೆಲೆವೀಡಾಗಿದ್ದು, ವಿವಿಧ ಶೈಲಿಯ ಶಿಲ್ಪಕಲೆ, ವೈವಿಧ್ಯಮಯ ಭೌಗೋಳಿಕ ಪ್ರದೇಶ ಮತ್ತು ಧಾರ್ಮಿಕ ಮಹ...
25/01/2026

ನಮ್ಮ ಭಾರತವು ವಿವಿಧ ಸಂಸ್ಕೃತಿ ಮತ್ತು ಭಾಷೆಗಳ ನೆಲೆವೀಡಾಗಿದ್ದು, ವಿವಿಧ ಶೈಲಿಯ ಶಿಲ್ಪಕಲೆ, ವೈವಿಧ್ಯಮಯ ಭೌಗೋಳಿಕ ಪ್ರದೇಶ ಮತ್ತು ಧಾರ್ಮಿಕ ಮಹತ್ವವುಳ್ಳ ಸ್ಥಳಗಳನ್ನೊಳಗೊಂಡಿದ್ದು, ತನ್ನಲ್ಲಿರುವ ಜನಪ್ರಿಯ ಪ್ರವಾಸಿ ತಾಣಗಳ ಶ್ರೀಮಂತಿಕೆಯಿಂದ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ. ಪ್ರವಾಸೋದ್ಯಮವು ದೇಶದ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದು ಅದರ ಬೆಳವಣಿಗೆಯು ಅತ್ಯಾವಶ್ಯಕವಾಗಿದೆ. ಈ ದೃಷ್ಟಿಯಿಂದ ಪ್ರವಾಸೋದ್ಯಮದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಜನವರಿ 25 ರಂದು ರಾಷ್ಟ್ರೀಯ ಪ್ರವಾಸೋದ್ಯಮ ದಿನವನ್ನು ಆಚರಿಸಲಾಗುತ್ತದೆ. ಭಾರತದಲ್ಲಿ ಪ್ರವಾಸೋದ್ಯಮದ ಉತ್ತೇಜನ ಮತ್ತು ಅಭಿವೃದ್ಧಿಗಾಗಿ ಪ್ರವಾಸೋದ್ಯಮ ಸಚಿವಾಲಯವು ಈ ದಿನವನ್ನು ಆಚರಣೆಗೆ ತಂದಿದೆ.
ಈ ದಿನದ ಆಚರಣೆಯು ಪ್ರವಾಸೋದ್ಯಮದ ಬಗ್ಗೆ ಜನತೆಯಲ್ಲಿ ಜಾಗೃತಿ ಮೂಡಿಸುವುದಲ್ಲದೆ ಅದರ ಸಮಾಜಿಕ, ಆರ್ಥಿಕ, ಸಾಂಸ್ಕೃತಿಕ ಮೌಲ್ಯವನ್ನು ತಿಳಿಸುತ್ತದೆ. ಪ್ರವಾಸೋದ್ಯಮದಿಂದ ದೇಶದ ಆರ್ಥಿಕತೆಯು ಹೆಚ್ಚುವುದಲ್ಲದೆ ಉದ್ಯೋಗವಕಾಶಗಳೂ ಹೆಚ್ಚುತ್ತವೆ. ಪ್ರವಾಸೋದ್ಯಮದ ಉತ್ತೇಜನದಿಂದ ಪ್ರವಾಸಿ ತಾಣಗಳ ಸುತ್ತಲಿನ ಪ್ರದೇಶಗಳಲ್ಲಿ ಪ್ರವಾಸಿಗರ ಅವಶ್ಯಕತೆಗಳನ್ನು ಪೂರೈಸುವ ನಿಟ್ಟಿನಲ್ಲಿ ಉದ್ಯೋಗ ಸೃಷ್ಟಿಯಾಗುವುದರೊಂದಿಗೆ ಅಲ್ಲಿನ ಜನರ ಜೀವನೋಪಾಯಕ್ಕೆ ಸಹಾಯವಾಗುತ್ತದೆ.
ಭಾರತದಲ್ಲಿರುವ ಇತರ ರಾಜ್ಯಗಳ ಪ್ರವಾಸಿ ತಾಣದಂತೆ ಕರ್ನಾಟಕವೂ ಪ್ರವಾಸೋದ್ಯಮದ ತಾಣಗಳನ್ನು ಹೊಂದಿರುವ ಒಂದು ಪ್ರಮುಖ ಕ್ಷೇತ್ರವಾಗಿದ್ದು, ಪ್ರಪಂಚದ ಮೂಲೆ ಮೂಲೆ ಯಿಂದ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಕರ್ನಾಟಕದ ’ಕೊಡಗು’ ತನ್ನಲ್ಲಿರುವ
ಜಲಪಾತಗಳು ಮತ್ತು ಮನಮೋಹಕವಾದ ಕಣಿವೆಗಳಿಂದ 'ಭಾರತದ ಸ್ಕಾಟ್ ಲ್ಯಾಂಡ್' ಎಂದು ಕರೆಯಲ್ಪಡುವುದಲ್ಲದೆ ಕರ್ನಾಟಕದ ಪ್ರವಾಸೋದ್ಯಮದ ಪ್ರಮುಖ ಆಕರ್ಷಣೆಯಾಗಿದೆ. ಕೆಮ್ಮಣ್ಣುಗುಂಡಿ, ಕುದುರೆಮುಖ, ಚಿಕ್ಕಮಗಳೂರು ಮುಂತಾದುವು ಹಸಿರಿನಿಂದ ಕಂಗೊಳಿಸಿದರೆ, ಮಂಗಳೂರು, ಮಲ್ಪೆ, ಮರವಂತೆ, ಕಾರವಾರಗಳು ಕಡಲ ತೀರಗಳಿಂದ ಮನಸೂರೆಗೊಳ್ಳುತ್ತವೆ. ಕೊಲ್ಲೂರು ಮೂಕಾಂಬಿಕೆ, ಹೊರನಾಡಿನ ಅನ್ನಪೂರ್ಣೇಶ್ವರಿ ದೇವಸ್ಥಾನ, ಶೃಂಗೇರಿಯ ಶಾರದಾಂಬೆ ದೇವಸ್ಥಾನ, ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ, ಕೂಡಲ ಸಂಗಮ ಮುಂತಾದವುಗಳು ಧಾರ್ಮಿಕ ಕ್ಷೇತ್ರಗಳಾಗಿವೆ. ಹಂಪಿ, ಬಾದಾಮಿ, ಬೇಲೂರು, ಹಳೆಬೀಡು,ಮೈಸೂರು, ಶ್ರವಣಬೆಳಗೊಳ ಮುಂತಾದವು ಶಿಲ್ಪಕಲೆಗಳಿಗೆ ಹೆಸರು ಪಡೆದಿದ್ದರೆ ಬಿಳಗಿರಿ ರಂಗನ ಬೆಟ್ಟ, ದಾಂಡೇಲಿ, ಕಪ್ಪತಗುಡ್ಡ ಮತ್ತು ಭದ್ರಾ ವನ್ಯಜೀವಿ ಧಾಮಗಳು ವೈವಿಧ್ಯಮಯ ಜೀವಸಂಕುಲಗಳಿಂದ ಪ್ರವಾಸಿಗರನ್ನು ಆಕರ್ಷಿಸುತ್ತಿವೆ.
ಪ್ರವಾಸೋದ್ಯಮ ದಿನದ ಆಚರಣೆಯ ಉದ್ದೇಶವು ಪ್ರವಾಸೋದ್ಯಮದ ಉತ್ತೇಜನ ಮತ್ತು ಜಾಗೃತಿಯ ಮೂಲಕ ದೇಶದ ಆರ್ಥಿಕ ಬೆಳವಣಿಗೆ ಮತ್ತು ದೇಶದ ಅಭಿವೃದ್ಧಿಯಾಗಿದೆ.

ಜನವರಿ - 25ರಾಷ್ಟ್ರೀಯ ಮತದಾರರ ದಿನಮತದಾನದ ಮಹತ್ವ ಅರಿಯುವ ಮೂಲಕ ಪ್ರಜಾ ಪ್ರಭುತ್ವವನ್ನು ಬಲಪಡಿಸೋಣ.
25/01/2026

ಜನವರಿ - 25

ರಾಷ್ಟ್ರೀಯ ಮತದಾರರ ದಿನ

ಮತದಾನದ ಮಹತ್ವ ಅರಿಯುವ ಮೂಲಕ ಪ್ರಜಾ ಪ್ರಭುತ್ವವನ್ನು ಬಲಪಡಿಸೋಣ.

ನಾಡಿನ ಸಮಸ್ತ ಜನತೆಗೆ ರಥಸಪ್ತಮಿಯ ಶುಭಾಶಯಗಳು.ಎಲ್ಲ ಗ್ರಹಗಳ ಅಧಿಪತಿಯಾಗಿರುವ ನಿರಾಕಾರವಾದ ಭಗವಂತನ ಸಗುಣರೂಪವಾಗಿರುವ ಭಗವಾನ್ ಸೂರ್ಯನಾರಾಯಣ ಜಗತ...
24/01/2026

ನಾಡಿನ ಸಮಸ್ತ ಜನತೆಗೆ ರಥಸಪ್ತಮಿಯ ಶುಭಾಶಯಗಳು.

ಎಲ್ಲ ಗ್ರಹಗಳ ಅಧಿಪತಿಯಾಗಿರುವ ನಿರಾಕಾರವಾದ ಭಗವಂತನ ಸಗುಣರೂಪವಾಗಿರುವ ಭಗವಾನ್ ಸೂರ್ಯನಾರಾಯಣ ಜಗತ್ತಿಗೆ ಚೈತನ್ಯವನ್ನು ನೀಡಲಿ.

#ರಥಸಪ್ತಮಿ

ವಿಶ್ವದಲ್ಲೇ ಅತಿ ದೊಡ್ಡ ಸಂಪರ್ಕ ಜಾಲ ಹೊಂದಿರುವ ಭಾರತೀಯ ಅಂಚೆಯ ಸಿಬ್ಬಂದಿಗೆ ರಾಷ್ಟ್ರೀಯ ಅಂಚೆ ದಿನದ ಶುಭಾಶಯಗಳು. ಕಷ್ಟಕರ ಸಮಯಗಳಲ್ಲೂ ಕರ್ತವ್ಯ...
10/10/2025

ವಿಶ್ವದಲ್ಲೇ ಅತಿ ದೊಡ್ಡ ಸಂಪರ್ಕ ಜಾಲ ಹೊಂದಿರುವ ಭಾರತೀಯ ಅಂಚೆಯ ಸಿಬ್ಬಂದಿಗೆ ರಾಷ್ಟ್ರೀಯ ಅಂಚೆ ದಿನದ ಶುಭಾಶಯಗಳು. ಕಷ್ಟಕರ ಸಮಯಗಳಲ್ಲೂ ಕರ್ತವ್ಯನಿಷ್ಠೆಗೆ ಹೆಸರುವಾಸಿಯಾಗಿರುವ ನಮ್ಮ ಅಂಚೆಯಣ್ಣ ಇಂದಿಗೂ ಸಂವಹನದ ಬಹುಮೂಲ್ಯ ಅಂಗ.

ಕಡಲತೀರದ ಭಾರ್ಗವ 🙏ನಡೆದಾಡುವ ವಿಶ್ವಕೋಶಜ್ಞಾನಪೀಠ ಪ್ರಶಸ್ತಿ ಪುರಸ್ಕೃತಶ್ರೀ ಕೋಟ ಶಿವರಾಮ ಕಾರಂತರಿಗೆ ಜನ್ಮದಿನದ ಶತನಮನಗಳು
10/10/2025

ಕಡಲತೀರದ ಭಾರ್ಗವ 🙏
ನಡೆದಾಡುವ ವಿಶ್ವಕೋಶ
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ
ಶ್ರೀ ಕೋಟ ಶಿವರಾಮ ಕಾರಂತರಿಗೆ ಜನ್ಮದಿನದ ಶತನಮನಗಳು

ನವರಾತ್ರಿಯ ಎಂಟನೆಯ ದಿನವಾದ ಇಂದು ಮಹಾಗೌರಿಯನ್ನು ಪೂಜಿಸಲಾಗುತ್ತದೆ. ನಾಡಿನ ಸಮಸ್ತ ಜನತೆಯ ಮೇಲೆ ಮಹಾಗೌರಿ ದೇವಿಯ ಕೃಪಾಶೀರ್ವಾದ ಸದಾ ಇರಲಿ ಎಂದು...
29/09/2025

ನವರಾತ್ರಿಯ ಎಂಟನೆಯ ದಿನವಾದ ಇಂದು ಮಹಾಗೌರಿಯನ್ನು ಪೂಜಿಸಲಾಗುತ್ತದೆ. ನಾಡಿನ ಸಮಸ್ತ ಜನತೆಯ ಮೇಲೆ ಮಹಾಗೌರಿ ದೇವಿಯ ಕೃಪಾಶೀರ್ವಾದ ಸದಾ ಇರಲಿ ಎಂದು ಪ್ರಾರ್ಥಿಸುತ್ತೇನೆ.

Address

MANJUNATHA C GOWDA
Bangalore
572130

Opening Hours

Monday 9am - 5pm
Tuesday 9am - 5pm
6pm - 7pm
Wednesday 9am - 5pm
6pm - 7pm
Thursday 9am - 5pm
6pm - 7pm
Friday 9am - 5pm
6pm - 7pm
Saturday 9am - 5pm
6pm - 7pm
Sunday 9am - 5pm

Telephone

9449708010

Website

Alerts

Be the first to know and let us send you an email when ಮಂಜುಗೌಡ posts news and promotions. Your email address will not be used for any other purpose, and you can unsubscribe at any time.

Contact The Practice

Send a message to ಮಂಜುಗೌಡ:

Share