05/08/2024
"ಬಿಸ್ಮಿಲ್ಲಾ" (بسم الله)
ಇದೊಂದು ಅರೇಬಿಕ್ ಭಾಷೆಯ ಮೂರು ಅಕ್ಷರಗಳ ಸಂಯೋಜನೆಯಾಗಿದೆ:
1. *ಬಿ (ب): ಅಂದರೆ "ಜೊತೆ" , "ದಿಂದ" ಅಥವಾ "ದಲ್ಲಿ"
2. ಇಸ್ಮ್* (سم): ಅಂದರೆ "ಹೆಸರು" , "ನಾಮ" ಅಥವಾ "ಗುಣಲಕ್ಷಣ"
3. *ಅಲ್ಲಾ* (الله): ಅಂದರೆ "ಮಹಾ ಮಹಿಮ ದೇವ" ಅಥವಾ "ಸರ್ವಶಕ್ತ ಮಹಾದೇವ"
ಆದ್ದರಿಂದ, ಈ ಮೂರು ಅಕ್ಷರಗಳನ್ನು ವಿಭಜನೆಮಾಡಿ ಅನುವಾದಿಸಿ ನೋಡಿದಾಗ, "ಬಿಸ್ಮಿಲ್ಲಾ" ಎಂದರೆ: "ಅಲ್ಲಾಹನ ಹೆಸರಿನಲ್ಲಿ" ಅಥವಾ "ಅಲ್ಲಾಹನ ನಾಮನೊಂದಿಗೆ" ವಿಶಾಲ ಅರ್ಥದಲ್ಲಿ, "ಬಿಸ್ಮಿಲ್ಲಾ" ಎಂದರೆ ಒಂದು ಆವಾಹನೆ: - "ದೇವರ ಹೆಸರಿನಲ್ಲಿ, ಅತ್ಯಂತ ಕರುಣಾಮಯಿ, ಸದಾ ಕಾರುಣ್ಯ ನಿಧಿ" (ಕುರಾನ್ ವಾಖ್ಯದಂತೆ "ಬಿಸ್ಮಿಲ್ಲಾ ಇರ್-ರಹಮಾನ್ ನಿರ್-ರಹೀಮ್") - "ಅಲ್ಲಾಹನ ಕೃಪೆದೊಂದಿಗೆ" - "ಅಲ್ಲಾಹನ ಮಾರ್ಗದಲ್ಲಿ" - "ಅಲ್ಲಾಹನ ಅನುಮತಿಯಿಂದ" ಎಂದಂತೆ.
ಇಸ್ಲಾಮಿನ ಸಂಸ್ಕೃತಿಯಲ್ಲಿ, "ಬಿಸ್ಮಿಲ್ಲಾ" ಸಾಮಾನ್ಯವಾಗಿ ಪ್ರತಿನಿತ್ಯ, ಪ್ರತಿಯೊಂದು ಶುಭ ಕಾರ್ಯ ಆರಂಭಿಸುವ ಮುನ್ನ ಬಳಸುವ ಶಬ್ದ ವಾಗಿದೆ: -
- ಆಚರಣೆಗಳು ಮತ್ತು ಪ್ರಾರ್ಥನೆಗಳನ್ನು ಪ್ರಾರಂಭಿಸುವಾಗ,
- ಆಶೀರ್ವಾದ, ಅನುಗ್ರಹ ಮತ್ತು ಮಾರ್ಗದರ್ಶನವನ್ನು ಪಡೆಯುವಾಗ,
- ಕೃತಜ್ಞತೆ ಮತ್ತು ಹೊಗಳಿಕೆಯನ್ನು ವ್ಯಕ್ತಪಡಿಸುವಾಗ.
- ರಕ್ಷಣೆ ಮತ್ತು ಸುರಕ್ಷತೆಯನ್ನು ಆಹ್ವಾನಿಸುವ ಉದ್ದೇಶದಿಂದ,
- ದೈವ ಭಕ್ತಿಯಲ್ಲಿ ಅವರವರ ನಂಬಿಕೆಯನ್ನ ಬಲ ಪಡಿಸುವ ಶಬ್ದ ಮತ್ತು ದೈವಿಕತೆಗೆ ಸಂಪರ್ಕಿಸುವ ಪ್ರಬಲ ಮತ್ತು ಅರ್ಥಪೂರ್ಣ ನುಡಿಗಟ್ಟು ಇದಾಗಿದೆ.
ಪ್ರತಿಯೊಂದು ಶಬ್ದದ ಅರ್ಥ ಮತ್ತು ಉಪಯುಕ್ತತೆಯಲ್ಲಿ ವಿವಿಧ ರೀತಿಯ ಅರ್ಥಗಳು ಅಡಗಿರುತ್ತವೆ. "ನಾನು ಅಲ್ಲಾಹನ ನಾಮದಿಂದ ಆರಂಭಿಸುತ್ತೇನೆ" ಎನ್ನುವುದಾದರೆ ಇನ್ನೊಂದು ಅರ್ಥದಲ್ಲಿ ನಾನು "ಅವನ ಹೊರೆತು ಬೇರೆ ಯಾವ ನಾಮದಿಂದಲೂ ಏನನ್ನು ಕೂಡ ಆರಂಭ ಮಾಡಲಾರೆ" ಎಂಬಂತೆ, ಮಗದೊಂದು ಅರ್ಥದಲ್ಲಿ ನೋಡಿದರೆ "ಋಣಾತ್ಮಕ ಶಕ್ತಿಯಾದ ಅಥವಾ ದುಷ್ಠ ಶಕ್ತಿಯಾದ ಶೈತಾನನಿಂದ ರಕ್ಷಣೆಯನ್ನು ಅಲ್ಲಾಹನಲ್ಲಿ ಬೇಡುತ್ತೇನೆ" ಎಂದರ್ಥ ಸಕಲ ಶುಭಕಾರ್ಯಗಳಲ್ಲಿ ವಿಘ್ನಗಳು ಅಥವಾ ಭಗ್ನ ಬಾಧೆಗಳು ಆಗದಿರದಂತೆ ಸಂಪೂರ್ಣ ಶ್ರೀರಕ್ಷೆಯನ್ನು ಪಡೆಯುವ ನಿಟ್ಟಿನಲ್ಲಿ ಅವನ ನಾಮದಿಂದ ಆರಂಭಿಸುವ ಪ್ರತಿಯೊಂದು ಕೆಲಸವು ಇಹಲೋಕದಲ್ಲಿ ಮತ್ತು ತದನಂತರ ಬರುವ, ಸದಾಕಾಲ ಬದುಕಬೇಕಾದಂತಹ ನಮ್ಮ ಆಲೋಕದಲ್ಲಿ ನಮಗೆ ಶಾಂತಿ ಮತ್ತು ನೆಮ್ಮದಿ ದೊರಕುವಂತೆ ನಮ್ಮ ಇಹಲೋಕದ ಪ್ರತಿಯೊಂದು ಕೆಲಸವು ಇನ್ನೊಬ್ಬರಿಗೆ ಒಳಿತು ಕೊಡುವುದಾಗಿರಿಲಿ ಹಾಗೂ ಸಹಾಯರೂಪಕ ಸಹಾಯವಾಗಿರಬೇಕು ಎನ್ನುವುದೇ ನಮ್ಮ ಜೀವನದ ಮೂಲ ಉದ್ದೇಶವಾಗಿದೆ.
✍️
ಶ್ರೀ. ಎಂ.ಕೆ.ಮೇತ್ರಿ, ವಕೀಲರು.