Advocate bheemaputri savitri

Advocate bheemaputri savitri karnataka maha janasene state President and criminal lawyer Bangalore High court. Karnataka.
(2)

2023. PTCL ಕಾಯ್ದೆ ತಿದ್ದುಪಡೆಗೆ ಒತ್ತಾಯಿಸಿ  ಶಾಸಕರ ಸಭೆಯಲ್ಲಿ sc/st ಶಾಸಕರ ಜೊತೆ ಸಭೆ ಸೇರಿದ ಸಂದರ್ಭದಲ್ಲಿ...ಜೈ ಭೀಮ್ ಭೀಮಪುತ್ರಿ ಸಾವಿತ...
19/02/2026

2023. PTCL ಕಾಯ್ದೆ ತಿದ್ದುಪಡೆಗೆ ಒತ್ತಾಯಿಸಿ ಶಾಸಕರ ಸಭೆಯಲ್ಲಿ sc/st ಶಾಸಕರ ಜೊತೆ ಸಭೆ ಸೇರಿದ ಸಂದರ್ಭದಲ್ಲಿ...
ಜೈ ಭೀಮ್ ಭೀಮಪುತ್ರಿ ಸಾವಿತ್ರಿ

ಶುಭೋದಯ ಬಂದುಗಳೆ...."ಭಯ ಇಲ್ಲದವನನ್ನು ಸಮುದ್ರಕ್ಕೆ ಎಸೆದರು ಸಹ ಬದುಕಿ ಬರುತ್ತಾನೆ. ಆದರೆ ಭಯ ಇದ್ದವನನ್ನು ತೊಟ್ಟಿಗೆ ಎಸೆದರೂ ಸತ್ತು ಹೋಗುತ್ತ...
17/02/2026

ಶುಭೋದಯ ಬಂದುಗಳೆ....
"ಭಯ ಇಲ್ಲದವನನ್ನು ಸಮುದ್ರಕ್ಕೆ ಎಸೆದರು ಸಹ ಬದುಕಿ ಬರುತ್ತಾನೆ. ಆದರೆ ಭಯ ಇದ್ದವನನ್ನು ತೊಟ್ಟಿಗೆ ಎಸೆದರೂ ಸತ್ತು ಹೋಗುತ್ತಾನೆ.."

ಗೆಲ್ಲಬೇಕು, ಸಾಧಿಸಲೆಬೇಕು ಎಂಬ ಮನಸ್ಸಿರುವ ವ್ಯಕ್ತಿಗೆ‌, ಅವಮಾನ ! ಅನುಮಾನ ! ಕೊನೆಯಲ್ಲಿ ಸನ್ಮಾನ.
ನಿನ್ನ ದಾರಿಯಲ್ಲಿ ನೀನಡೆ, ಅಂಜದಿರು, ಎದೆಗುಂದದಿರು,
ಹೆಚ್ಚು ಪೆಟ್ಟುತಿಂದ ಕಲ್ಲು ಶಿಲೆಯಾಗಿ ನಿಂತು ಅಭಿಷೇಕ ಪಡೆಯುವುದು...!!!
ಮನುಜ ಇದನ್ನು ನೀ ಎಂದೆಂದಿಗೂ ಮರೆಯದಿರು.
ಭೀಮಪುತ್ರಿ ಸಾವಿತ್ರಿ..

 #ಫೆಬ್ರವರಿ14 .ಇಂದು ಪುಲ್ವಾಮ ದಾಳಿ ನಡೆದ ದಿನ. ಈ ದಿನ ನಮ್ಮ ನೆಲದಲ್ಲಿ ಉಗ್ರರ ಅಟ್ಟಹಾಸಕ್ಕೆ ನಮ್ಮ ಯೋಧರು ಬಲಿಯಾದರು. ಪ್ರೀತಿಯ ದಿನಾಚರಣೆಯ ದ...
14/02/2026

#ಫೆಬ್ರವರಿ14 .ಇಂದು ಪುಲ್ವಾಮ ದಾಳಿ ನಡೆದ ದಿನ. ಈ ದಿನ ನಮ್ಮ ನೆಲದಲ್ಲಿ ಉಗ್ರರ ಅಟ್ಟಹಾಸಕ್ಕೆ ನಮ್ಮ ಯೋಧರು ಬಲಿಯಾದರು. ಪ್ರೀತಿಯ ದಿನಾಚರಣೆಯ ದಿನವೇ ಹಿಂಸೆಯ ನರ್ತನವಾಗಿ ಪ್ರೀತಿಯೆ ಕೊಲೆಯಾದ ದಿನವಿದು. ಹಿಂಸೆಯನ್ನು ಹಿಂಸೆಯಿಂದಲೇ ಕೊನೆಯಾಗಿಸಿ ಶಾಂತಿ ನಿರ್ಮಾಣ ಮಾಡುವುದು ಕೆಲವೊಮ್ಮೆ ಅನಿವಾರ್ಯವಾಗುತ್ತದೆ. ಮನುಷ್ಯ ತಪ್ಪು ಮಾಡಿದಾಗ ಆತನಿಗ ಬುದ್ಧಿ ಹೇಳಿ ಸರಿಯಾದ ದಾರಿಗೆ ತರಬಹುದು ಆದರೆ ಮಾನವೀಯ ಗುಣಗಳನ್ನೇ ಕಳೆದುಕೊಂಡು ತಲೆಮಾಸಿದವನು ಮಾನವನ ರೂಪದಲ್ಲಿ ಇರುತ್ತಾನೆಯೇ ಹೊರತು ಆತ ಮಾನವನಲ್ಲ! ಆದ್ದರಿಂದ ಅಂತಹವರನ್ನು ಕೊನೆಯಾಗಿಸಿ ಶಾಂತಿ ನಿರ್ಮಿಸುವುದೇ ಅನಿವಾರ್ಯವೆನ್ನುತ್ತಾ ಪುಲ್ವಾಮ ದಾಳಿಯಲ್ಲಿ ಅಮರರಾದ ಯೋಧರನ್ನು ನೆನೆಯುತ್ತಾ "ಕ್ಷಮಿಸಿ ಬಿಡಿ ಯೋಧರೇ"

ಪ್ರೀತಿಯ ಕಡಲಿನ ಉಬ್ಬರದಲ್ಲಿ ಜಗವೆಲ್ಲ ತೋಯ್ದ ದಿನದಲ್ಲಿ
ರಕ್ತತ ಹೊಳೆ ಹರಿಸಿದ ರಕ್ಕಸರ ನೆನೆದಾಗ ಪುಲ್ವಾಮದ ಕರಾಳತೆಯ ನೆನಪು ಮತ್ತೆ ಮತ್ತೆ ಮಾರ್ದನಿಸಿದಾಗ ನನ್ನೆದೆಯಲ್ಲಿ
ಕ್ರೌರ್ಯತೆಯ ಬಿಂಬದ ದೆವ್ವವು ಅಣಕಿಸುತ ಗಹಗಹಿಸಿ ಕುಣಿವಾಗ
ನಿಮ್ಮ ನೆನಪು ಕೇವಲ ನೆನಪಾದರೆ ಸಾಕೆ?

ಎಡ-ಬಲದ ಬಡಿದಾಟದಲ್ಲಿ ದೇಶದುದ್ದ ಚರ್ಚೆಯಾಗಿದ್ದಾದರೂ ನಿಮ್ಮ ಕುಟುಂಬದ ಆರ್ತನಾದ ಇನ್ನೂ ಮುಗಿಯದೇ ಕೇವಲ ಕಪಟಿಗಳೆ ಮುಗಿಬಿದ್ದು ಕುಣಿವಾಗ ನೈಜತೆಯ ನಿಮ್ಮ ದೇಶ ಪ್ರೇಮದ ಋಣಕೆ ನಿಮ್ಮಂತೆ ನಾನು ರೋಧಿಸುತ ಕೂರುವುದೆ?

ಹಗಲು ರಾತ್ರಿಗಳು ಅರಿವಿಗೆ ಬಾರದೆ ದೇಶಾಭಿಮಾನವೆ ಉಸಿರಾಗಿಸಿ ಅಮರರಾದವರು ನೀವು ನಿಮ್ಮಂತೆ ನಾವು ನಮ್ಮಂತೆ ನೀವೆಂದು
ಹೆಗಲಿಗೆ ಹೆಗಲುಕೊಟ್ಟು ನಡೆದರೆ ಸಾಕೇನು?
ಆದರ್ಶಗಳ ಪಾಲನೆಯು ಭಾಷಣಕೆ ಮಿತಿಯೇನು?

ಏನಾದರೇನು ಸ್ವಾಮಿ ಬೆಂಬಿಡದೆ ಕಾಡುವ ರಕ್ಕಸರಿಗೆ ಕೊನೆಹಾಡದೆ
ಜಟಿಲ ಸಮಸ್ಯೆಗಳ ಜೀವಂತವಿಟ್ಟರೆ ಕಂಬನಿಗಳ ಮಳೆಯು ಸುರಿಯದೆ ಇರುವುದೆ? ಶಾಂತಿಗೆ ಹಿಂಸೆಯು ಅನಿವಾರ್ಯವೆ ಎನುವಾಗ ಮುಗ್ಧರ ಜೀವವು ಕ್ಷಣವು ಕ್ಷಣವು ಗತಿಸುವಾಗ
ಯಾರಪ್ಪಣೆಗೆ ಕಾಯಬೇಕಿದೆ?

ಮೌನದಿ ಯಾರನ್ನು ಮೆಚ್ಚಿಸಬೇಕು ಅಮರರಾದವರ ಆತ್ಮಕೆ ತುಸು ಶಾಂತಿಯನು ನೀಡಲೇಬೇಕು.. ಪ್ರೀತಿಯ ಬದುಕಿಗೆ ಸಾರ್ಥಕ್ಯ ಕೊಡಲೇಬೆಕು. ಅಲ್ಲಿಯವರೆಗು ನಮ್ಮ ಕ್ಷಮಿಸಿಬಿಡಿ ಯೋಧರೇ.
ಇಂತಿ .ಭೀಮಪುತ್ರಿ ಸಾವಿತ್ರಿ...

ಜೀವನದಲ್ಲಿ ನಂಬಿಕೆ ಸೋತಾಗ ಭವಿಷ್ಯದ ಭರವಸೆ ತುಂಬಿದ್ದು ಈ ಪುಸ್ತಕ ಮಾತ್ರ..!!
13/02/2026

ಜೀವನದಲ್ಲಿ ನಂಬಿಕೆ ಸೋತಾಗ ಭವಿಷ್ಯದ ಭರವಸೆ ತುಂಬಿದ್ದು ಈ ಪುಸ್ತಕ ಮಾತ್ರ..!!

ವಿಶ್ವದ ಮಹಾ ಮಾನವತಾವಾದಿ, ಸಂವಿಧಾನ ಶಿಲ್ಪಿ,ಭಾರತ ರತ್ನ ಡಾ ಬಿ.ಆರ್.ಅಂಬೇಡ್ಕರ್ ಅವರ "ವಂಶದ ಕುಡಿ" ಡಾ// BR ಅಂಬೇಡ್ಕರ್ ರವರ ಮಮ್ಮೊಗರಾದ"ಆನಂದ...
11/02/2026

ವಿಶ್ವದ ಮಹಾ ಮಾನವತಾವಾದಿ, ಸಂವಿಧಾನ ಶಿಲ್ಪಿ,ಭಾರತ ರತ್ನ ಡಾ ಬಿ.ಆರ್.ಅಂಬೇಡ್ಕರ್ ಅವರ "ವಂಶದ ಕುಡಿ" ಡಾ// BR ಅಂಬೇಡ್ಕರ್ ರವರ ಮಮ್ಮೊಗರಾದ"ಆನಂದರಾಜ್" ಅಂಬೇಡ್ಕರ್ ‌ರವರ ಜೊತೆ. ಭೀಮಪುತ್ರಿ ಸಾವಿತ್ರಿ....

"ಸಮಸ್ತ ನಾಡಿನ ಜನತೆಗೆ  ಶ್ರೀಮತಿ ರಮಾಭಾಯಿ ಅಂಬೇಡ್ಕರ್ ಜಯಂತಿಯ ಹಾರ್ಧಿಕ ಶುಭಾಷಯಗಳು"ಮಾತೆ ರಮಾಭಾಯಿ ಅಂಬೇಡ್ಕರ್ ಪ್ರಶಸ್ತಿ ಪಡೆದ ದಿನ ಧನ್ಯವಾದ...
07/02/2026

"ಸಮಸ್ತ ನಾಡಿನ ಜನತೆಗೆ ಶ್ರೀಮತಿ ರಮಾಭಾಯಿ ಅಂಬೇಡ್ಕರ್ ಜಯಂತಿಯ ಹಾರ್ಧಿಕ ಶುಭಾಷಯಗಳು"
ಮಾತೆ ರಮಾಭಾಯಿ ಅಂಬೇಡ್ಕರ್ ಪ್ರಶಸ್ತಿ ಪಡೆದ ದಿನ ಧನ್ಯವಾದಗಳು ಹೊಸಬೆಳಕು ಟ್ರಸ್ಟ್ ಜಿಗಣಿ.

"ಪ್ರತಿಯೊಬ್ಬ ಪುರುಷನ ಯಶಸ್ಸಿನ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ" ಎಂಬ ಮಾತನ್ನು ನಾವೆಲ್ಲರೂ ಕೇಳಿದ್ದೇವೆ. ಅಂತೆಯೇ , ಡಾ/ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಯಶಸ್ಸಿನ ಹಿಂದೆ ಪತ್ನಿ "ರಮಾಭಾಯಿಯವರ ತ್ಯಾಗ ಎದ್ದೂ ಕಾಣುತ್ತದೆ.

ಬಹುಶಃ ರಮಾಭಾಯಿಯವರ ಸ್ಥಾನದಲ್ಲಿ ಬೇರೆ ಮಹಿಳೆ ಇದ್ದಿದ್ದರೇ ಡಾ/ ಬಾಬಾ ಸಾಹೇಬ್ ಅಂಬೇಡ್ಕರ್ ರವರು ಈ ಮಟ್ಟದ ಮಹಾನ್ ಸಾಧನೆಯನ್ನು ಮಾಡಲು ಸಾಧ್ಯವಾಗುತ್ತಿರಲಿಲ್ಲ ...

ಅನಕ್ಷರಸ್ಥಯೂ , ಮುಗ್ದೆಯು, ಶೀಲವಂತೆಯು ಹಾಗೂ ತ್ಯಾಗಮಹಿಯು ಆದ ಶ್ರೀಮತಿ ರಮಾಭಾಯಿಯವರು,, ತನ್ನ ಪತಿ ಡಾ/ ಬಾಬಾ ಸಾಹೇಬ್ ಅಂಬೇಡ್ಕರ್ ರವರು ವಿದೇಶಗಳಲ್ಲಿ ವಿದ್ಯಾಭ್ಯಾಸ ಮಾಡುವಾಗ , ನಂತರ ಭಾರತದಲ್ಲಿ ಶೋಷಿತರ ಪರ ಬೃಹತ್ ಹೋರಾಟ ನಡೆಸುವಾಗ ಒಬ್ಬ ಹೆಣ್ಣು ಸಹಜವಾಗಿ ಬಯಸುವ ಸಂಸಾರ ಸುಖಗಳನ್ನು ಹಾಗೂ ಶ್ರಿಮಂತಿಕೆ ಜೀವನ ಶೈಲಿಯನ್ನು ಎಂದೂ ಬಯಸದೇ ಗಂಡನ ಏಳಿಗೆಗಾಗಿ , ಗಂಡನ ಸಂತೋಷಕ್ಕಾಗಿ, ಪತಿಯು ನಡೆಸುತ್ತಿದ್ದ ದಣಿವಿಲ್ಲದ ಹೋರಾಟಗಳಿಗಾಗಿ ಬಡತನದ ಹಾಗೂ ಸಂಕಷ್ಟದ ಜೀವನದಲ್ಲೇ ಬದುಕು ನಡೆಸಿ ಡಾ/ ಬಾಬ ಸಾಹೇಬ್ ಅಂಬೇಡ್ಕರ್ ರವರಿಗೆ ಬೆನ್ನೇಲುಬಾಗಿ ನಿಂತು ಸಹಕರಿಸಿದ ದೊಡ್ಡ ತ್ಯಾಗಮಯಿ ಶೀಮತಿ ರಮಾಭಾಯಿ ಯವರು ಪ್ರತಿಯೊಂದು ಹೆಣ್ಣಿಗೂ ಆದರ್ಶಪ್ರೀಯ...
ಅವರ ಶಕ್ತಿ ಸಾಮರ್ಥ್ಯ ಪ್ರತಿಯೊಂದು ಹೆಣ್ಣಿನಲ್ಲಿಯು ಬರಲಿ ಎಂದು ಆಶಿಸುತ್ತಾ ಮೊತ್ತೊಮ್ಮೆ ನಾಡಿನ ಜನತೆಗೆ "ಮಾತೆ ರಮಾಭಾಯಿ ಅಂಬೇಡ್ಕರ್ ರವರ ಜಯಂತಿಯ ಹಾರ್ಧಿಕ ಶುಭಾಷಯಗಳು...
ಜೈ ಭೀಮ್
" ಭೀಮಪುತ್ರಿ ಸಾವಿತ್ರಿ "...

ಶುಭೋದಯ ಬಂದುಗಳೆ...ಮಹಿಳೆ ತನ್ನ ಹಕ್ಕುಗಳಿಂದ ಎಂದಿಗೂ ವಂಚಿತಳಾಗುವುದಿಲ್ಲ, ವಿಶೇಷವಾಗಿ ಮಹಿಳಾ ವಕೀಲರು.
06/02/2026

ಶುಭೋದಯ ಬಂದುಗಳೆ...
ಮಹಿಳೆ ತನ್ನ ಹಕ್ಕುಗಳಿಂದ ಎಂದಿಗೂ ವಂಚಿತಳಾಗುವುದಿಲ್ಲ, ವಿಶೇಷವಾಗಿ ಮಹಿಳಾ ವಕೀಲರು.

Address

Bangalore

Opening Hours

Monday 9am - 5pm
Tuesday 9am - 5pm
Wednesday 9am - 5pm
Thursday 9am - 5pm
Friday 9am - 5pm
Saturday 9am - 5pm

Telephone

+917019948883

Website

Alerts

Be the first to know and let us send you an email when Advocate bheemaputri savitri posts news and promotions. Your email address will not be used for any other purpose, and you can unsubscribe at any time.

Contact The Practice

Send a message to Advocate bheemaputri savitri:

Share