28/07/2026
ನೆಲಮಂಗಲ KSRTC ಡಿಪೋ ವ್ಯಾಪ್ತಿಯ ಟಿ. ಬೇಗೂರು ಬಸ್ ನಿಲ್ದಾಣದಲ್ಲಿ ಎಕ್ಸ್‌ಪ್ರೆಸ್ ಬಸ್‌ಗಳು ನಿಲುಗಡೆ ನೀಡದಿರುವುದರಿಂದ, ಪ್ರತಿದಿನ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು, ಉದ್ಯೋಗಸ್ಥರು ಹಾಗೂ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ಟಿ. ಬೇಗೂರು ಸುತ್ತಮುತ್ತಲಿನ ಸುಮಾರು 20ಕ್ಕೂ ಹೆಚ್ಚು ಗ್ರಾಮಗಳ ಜನರು ಈ ಬಸ್ ನಿಲ್ದಾಣವನ್ನು ಅವಲಂಬಿಸಿದ್ದು, ಎಕ್ಸ್‌ಪ್ರೆಸ್ ಬಸ್‌ಗಳು ನಿಲುಗಡೆ ನೀಡದ ಕಾರಣ ಸಮಯ ವ್ಯರ್ಥವಾಗುವುದು, ಹೆಚ್ಚುವರಿ ಪ್ರಯಾಣ ವೆಚ್ಚ ಮತ್ತು ದಿನನಿತ್ಯದ ಸಂಚಾರದಲ್ಲಿ ಅನೇಕ ಸಮಸ್ಯೆಗಳು ಎದುರಾಗುತ್ತಿವೆ.
ಈ ಸಾರ್ವಜನಿಕ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಕರ್ನಾಟಕ ಸಂರಕ್ಷಣಾ ವೇದಿಕೆ ವತಿಯಿಂದ ರಾಜ್ಯಾಧ್ಯಕ್ಷರಾದ ಶ್ರೀ ಎಸ್. ಶಿವಕುಮಾರ್ ಹಾಗೂ ರಾಜ್ಯ ಕಾರ್ಯಕ್ಷರಾದ ಚಿಕ್ಕಹನುಮಯ್ಯ ಅವರ ನೇತೃತ್ವದಲ್ಲಿ, , ತಾಲೂಕು ಅಧ್ಯಕ್ಷರು, ರಂಗ ರಾಜು. ಜಿ ಆರ್ ಹಾಗೂ ತಾಲೂಕು ಪ್ರಧಾನ ಕಾರ್ಯದರ್ಶಿಗಳಾದ ಕೃಷ್ಣ ಮೂರ್ತಿ N ಹಾಗೂ ಸಂಘಟನೆಯ ಎಲ್ಲಾ ಪದಾಧಿಕಾರಿಗಳು ಮತ್ತು ಸದಸ್ಯರು ಇಂದು ನೆಲಮಂಗಲ KSRTC ಡಿಪೋ ವ್ಯವಸ್ಥಾಪಕರಿಗೆ ಮನವಿ ಪತ್ರ ಸಲ್ಲಿಸಿ, ಟಿ. ಬೇಗೂರು ಬಸ್ ನಿಲ್ದಾಣದಲ್ಲಿ ಎಕ್ಸ್‌ಪ್ರೆಸ್ ಬಸ್‌ಗಳಿಗೆ ಕಡ್ಡಾಯವಾಗಿ ನಿಲುಗಡೆ ನೀಡುವಂತೆ ಒತ್ತಾಯಿಸಿದರು.
ಸಾರ್ವಜನಿಕರ ಹಿತದೃಷ್ಟಿಯಿಂದ ಈ ಮನವಿಯನ್ನು ಶೀಘ್ರದಲ್ಲೇ ಪರಿಗಣಿಸಿ, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ಸೂಕ್ತ ಕ್ರಮ ಕೈಗೊಳ್ಳುವಂತೆ ಕರ್ನಾಟಕ ಸಂರಕ್ಷಣಾ ವೇದಿಕೆ ಆಗ್ರಹಿಸುತ್ತದೆ.
ಜನರ ಸಮಸ್ಯೆಗೆ ಸ್ಪಂದಿಸುವುದೇ ನಮ್ಮ ಧ್ಯೇಯ – ಸಾರ್ವಜನಿಕರ ಹಿತಕ್ಕಾಗಿ ನಮ್ಮ ಹೋರಾಟ ನಿರಂತರ.