ಕಾನೂನು ತಿಳಿ

ಕಾನೂನು ತಿಳಿ ಕಾನೂನು ಅಧ್ಯಯನ ಮಾಡಿದ ವ್ಯಕ್ತಿಯನ್ನು ಕಾನೂನೇ ಕಾಪಾಡುತ್ತದೆ..!

ಕಂದಾಯ ನಿರೀಕ್ಷಕರ ( Revenue Inspector) ಅಧಿಕಾರ ಮತ್ತು ಕರ್ತವ್ಯಗಳು.
14/08/2026

ಕಂದಾಯ ನಿರೀಕ್ಷಕರ ( Revenue Inspector) ಅಧಿಕಾರ ಮತ್ತು ಕರ್ತವ್ಯಗಳು.

ಕಲ್ಕಿ (ಸಂಭವಾಮಿ ಯುಗೇ ಯುಗೇ)⁠ಶ್ರೀಮದ್ಭಾಗವತದ ೧೨ನೇ ಸ್ಕಂಧದ ೨ನೇ ಅಧ್ಯಾಯ ಮತ್ತು ⁠ಕಲ್ಕಿ ಪುರಾಣಗಳಲ್ಲಿ ಕಲಿಯುಗದ ಅಂತ್ಯದ ವೇಳೆಗೆ (ಭವಿಷ್ಯದಲ್...
08/08/2026

ಕಲ್ಕಿ (ಸಂಭವಾಮಿ ಯುಗೇ ಯುಗೇ)

⁠ಶ್ರೀಮದ್ಭಾಗವತದ ೧೨ನೇ ಸ್ಕಂಧದ ೨ನೇ ಅಧ್ಯಾಯ ಮತ್ತು ⁠ಕಲ್ಕಿ ಪುರಾಣಗಳಲ್ಲಿ ಕಲಿಯುಗದ ಅಂತ್ಯದ ವೇಳೆಗೆ (ಭವಿಷ್ಯದಲ್ಲಿ) ಮಾನವ ಸಮಾಜ, ಪ್ರಕೃತಿ ಮತ್ತು ಸಂಸ್ಕೃತಿ ಹೇಗೆ ಸಂಪೂರ್ಣವಾಗಿ ಕುಸಿಯುತ್ತದೆ ಎಂಬುದರ ಭೀಕರ ಲಕ್ಷಣಗಳನ್ನು ಸ್ಪಷ್ಟವಾಗಿ ಭವಿಷ್ಯ ನುಡಿಯಲಾಗಿದೆ. ಆ ಪ್ರಮುಖ ಲಕ್ಷಣಗಳು ಇಲ್ಲಿವೆ:-

೧. ಮಾನವ ಗುಣಗಳು ಮತ್ತು ಆಯುಷ್ಯದ ಕುಸಿತ
ಮಾನವೀಯತೆಯ ನಾಶ: ಧರ್ಮ, ಸತ್ಯ, ಶೌಚ (ಸ್ವಚ್ಛತೆ), ಕ್ಷಮೆ ಮತ್ತು ದಯೆ ಎಂಬ ಐದು ಪ್ರಮುಖ ಗುಣಗಳು ದಿನದಿಂದ ದಿನಕ್ಕೆ ಕ್ಷೀಣಿಸುತ್ತಾ ಹೋಗುತ್ತವೆ.
ಕಡಿಮೆಯಾಗುವ ಆಯುಷ್ಯ: ಕಲಿಯುಗದ ತೀರಾ ಕೊನೆಯ ಹಂತಕ್ಕೆ ತಲುಪುವಾಗ ಮನುಷ್ಯನ ಗರಿಷ್ಠ ಆಯುಷ್ಯ ಕೇವಲ ೨೦ ರಿಂದ ೩೦ ವರ್ಷಗಳಿಗೆ ಕುಸಿಯುತ್ತದೆ. ಮಾನವರ ದೈಹಿಕ ಬೆಳವಣಿಗೆಯೂ ಕುಂಠಿತಗೊಂಡು ಕರಗಲಾರಂಭಿಸುತ್ತದೆ.
ದುರ್ಬಲ ನೆನಪಿನ ಶಕ್ತಿ: ಜನರ ದೈಹಿಕ ಶಕ್ತಿ ಮಾತ್ರವಲ್ಲದೆ ಬುದ್ಧಿಶಕ್ತಿ ಹಾಗೂ ನೆನಪಿನ ಶಕ್ತಿಯೂ ತೀವ್ರವಾಗಿ ಕ್ಷೀಣಿಸುತ್ತದೆ.

೨. ಹಣ ಮತ್ತು ಅಧಿಕಾರವೇ ಸರ್ವಸ್ವ
ದುಡ್ಡೇ ದೊಡ್ಡಪ್ಪ: ಕಲಿಯುಗದಲ್ಲಿ ಒಬ್ಬ ವ್ಯಕ್ತಿಯ ಯೋಗ್ಯತೆ, ಉನ್ನತ ಜನ್ಮ ಮತ್ತು ಸದ್ಗುಣಗಳನ್ನು ಅವನ ಗುಣದಿಂದಲ್ಲ, ಬದಲಿಗೆ ಅವನ ಬಳಿ ಇರುವ ಹಣದ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ. ಹಣವಿಲ್ಲದವನನ್ನು ಅಪವಿತ್ರ ಅಥವಾ ನೀಚ ಎಂದು ನೋಡಲಾಗುತ್ತದೆ.

ಬಲವಂತವೇ ನ್ಯಾಯ: ಕಾನೂನು ಮತ್ತು ನ್ಯಾಯ ಎಂಬುದು ಕೇವಲ ದೈಹಿಕ ಅಥವಾ ರಾಜಕೀಯ ಶಕ್ತಿ ಇರುವವರ ಪರವಾಗಿ ಮಾತ್ರ ಕೆಲಸ ಮಾಡುತ್ತದೆ.
ಆಡಳಿತಗಾರರೇ ಕಳ್ಳರು: ದೇಶವನ್ನು ಆಳುವ ರಾಜರು ಅಥವಾ ನಾಯಕರು ಪ್ರಜೆಗಳನ್ನು ರಕ್ಷಿಸುವ ಬದಲು ಕಳ್ಳ-ಕಾಕರಂತೆ ವರ್ತಿಸಿ, ವಿಪರೀತ ತೆರಿಗೆಗಳ ಮೂಲಕ ಜನರನ್ನು ಸುಲಿಗೆ ಮಾಡುತ್ತಾರೆ.

೩. ಕೌಟುಂಬಿಕ ಮತ್ತು ಸಾಮಾಜಿಕ ಕುಸಿತ
ಸ್ವಾರ್ಥದ ಸಂಬಂಧಗಳು: ಗಂಡು ಮತ್ತು ಹೆಣ್ಣಿನ ನಡುವಿನ ಸಂಬಂಧಗಳು ಕೇವಲ ಬಾಹ್ಯ ಆಕರ್ಷಣೆಯ ಮೇಲೆ ಮಾತ್ರ ನಿಂತಿರುತ್ತವೆ. ಮದುವೆ ಎಂಬ ಪವಿತ್ರ ಬಂಧವು ಕೇವಲ ಬಾಯಿಮಾತಿನ ಒಪ್ಪಂದಕ್ಕೆ ಸೀಮಿತವಾಗುತ್ತದೆ.

ಉದರಂಭರಣವೇ ಜೀವನದ ಗುರಿ: ಕೇವಲ ಹೊಟ್ಟೆ ತುಂಬಿಸಿಕೊಳ್ಳುವುದು ಮತ್ತು ಸ್ವಾರ್ಥವನ್ನು ಕಾಯ್ದುಕೊಳ್ಳುವುದೇ ಜೀವನದ ಏಕೈಕ ಪರಮ ಗುರಿಯಾಗುತ್ತದೆ. ತಲೆಕೂದಲಿನ ವಿನ್ಯಾಸ (ಹೇರ್‌ಸ್ಟೈಲ್) ಚನ್ನಾಗಿದ್ದರೆ ಮಾತ್ರ ಆತ ಸುಂದರ ಎಂದು ನಿರ್ಧರಿಸಲಾಗುತ್ತದೆ.
ಭಾಷಣಕಾರರೇ ಪಂಡಿತರು: ನಿಜವಾದ ಜ್ಞಾನವಿಲ್ಲದಿದ್ದರೂ ಕೇವಲ ಮಾತುಗಳ ಜಾಲವನ್ನು ಹೆಣೆಯುವ ಚಾತುರ್ಯ ಇರುವವರನ್ನು ಜ್ಞಾನಿ ಅಥವಾ ಮಹಾ ಪಂಡಿತರೆಂದು ಸಮಾಜ ಗೌರವಿಸುತ್ತದೆ.

೪. ಪ್ರಕೃತಿ ಮತ್ತು ಪರಿಸರದ ವಿನಾಶ
ಭೀಕರ ಬರಗಾಲ: ಮಳೆ-ಬೆಳೆಗಳು ಸಂಪೂರ್ಣವಾಗಿ ನಿಂತುಹೋಗುತ್ತವೆ. ತೀವ್ರವಾದ ಚಳಿ, ಗಾಳಿ, ಬಿಸಿಲು ಮತ್ತು ಪ್ರವಾಹಗಳಂತಹ ನೈಸರ್ಗಿಕ ವಿಕೋಪಗಳಿಂದ ಜನರು ತತ್ತರಿಸುತ್ತಾರೆ.
ಕಾಡುಗಳ ಪಲಾಯನ: ಹಸಿರು ನಾಶವಾಗಿ ಇಡೀ ಭೂಮಿ ಮರಭೂಮಿಯಂತಾಗುತ್ತದೆ. ಹಸಿವಿನ ಯಾತನೆ ತಾಳಲಾರದೆ ಜನರು ಕಾಡುಗಳಿಗೆ ಓಡಿಹೋಗಿ ಎಲೆ, ಬೇರು ಮತ್ತು ಮಾಂಸವನ್ನು ತಿಂದು ಬದುಕಬೇಕಾಗುತ್ತದೆ.

ಕಲಿಯುಗದ ಇಂತಹ ಘೋರ ಪರಿಸ್ಥಿತಿಯು ಮಿತಿಮೀರಿದಾಗ, ಇಡೀ ಮಾನವಕುಲವು ಅಸಭ್ಯತೆಯ ಪರಮಾವಧಿಗೆ ತಲುಪಿದಾಗ ಭಗವಾನ್ ಕಲ್ಕಿಯು ಬಿಳಿ ಕುದುರೆಯನ್ನೇರಿ ದುಷ್ಟರ ಸಂಹಾರಕ್ಕೆ ಧರೆಗಿಳಿಯುತ್ತಾನೆ.

ರಸ್ತೆಯಲ್ಲಿ ರಂಪಾಟ ಪ್ರಕರಣ: ಮಾಲೂರು ಪ್ರಧಾನ ಸಿವಿಲ್ ನ್ಯಾಯಾಧೀಶೆ ಗಾಯತ್ರಿ ಬೀದರ್ ಜಿಲ್ಲೆಗೆ ವರ್ಗಾವಣೆ!ರಸ್ತೆಯಲ್ಲಿ ನಡೆದ ಗಲಾಟೆ ಹಾಗೂ ಅಧಿಕ...
06/08/2026

ರಸ್ತೆಯಲ್ಲಿ ರಂಪಾಟ ಪ್ರಕರಣ: ಮಾಲೂರು ಪ್ರಧಾನ ಸಿವಿಲ್ ನ್ಯಾಯಾಧೀಶೆ ಗಾಯತ್ರಿ ಬೀದರ್ ಜಿಲ್ಲೆಗೆ ವರ್ಗಾವಣೆ!
ರಸ್ತೆಯಲ್ಲಿ ನಡೆದ ಗಲಾಟೆ ಹಾಗೂ ಅಧಿಕಾರ ದುರ್ಬಳಕೆ ಆರೋಪಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್‌ನಿಂದ ತೀವ್ರ ತರಾಟೆಗೆ ಒಳಗಾಗಿದ್ದ ಕೋಲಾರ ಜಿಲ್ಲೆಯ ಮಾಲೂರು ಪ್ರಧಾನ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶೆ ಗಾಯತ್ರಿ ಅವರ ಕುರಿತು ರಾಜ್ಯಾದ್ಯಂತ ಭಾರೀ ಚರ್ಚೆ ನಡೆಯುತ್ತಿದೆ. ಇದರ ಬೆನ್ನಲ್ಲೇ ನ್ಯಾಯಾಧೀಶೆ ಗಾಯತ್ರಿ ಅವರನ್ನು ಬೀದರ್ ಜಿಲ್ಲೆಗೆ ವರ್ಗಾವಣೆ ಮಾಡಲಾಗಿದೆ

ಹಿನ್ನೆಲೆ ಏನು?

ಗಾಯತ್ರಿ ಅವರು ಮಾಲೂರಿನಲ್ಲಿ ತಮ್ಮ ಖಾಸಗಿ ಇನ್ನೋವಾ ಕಾರಿನಲ್ಲಿ ತೆರಳುತ್ತಿದ್ದ ವೇಳೆ, ರಸ್ತೆಯಲ್ಲಿ ಬಂದ ಯುವಕ ಕೆ.ಎಂ. ವಿನಯ್ ಎಂಬುವವರ ಜೊತೆ ಮಾತಿನ ಚಕಮಕಿ ನಡೆದಿತ್ತು. ಈ ವೇಳೆ ದರ್ಪ ತೋರಿ ಅಧಿಕಾರ ದುರುಪಯೋಗಪಡಿಸಿಕೊಳ್ಳಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ಅಲ್ಲದೆ, ವಿನಯ್ ಅವರ ತಾಯಿ ವಿ. ಕವಿತಾ ಹಾಗೂ ಅಜ್ಜ ಪಿ. ವೆಂಕಟೇಶ್ ವಿರುದ್ಧ ಪೊಲೀಸರ ಮೇಲೆ ಒತ್ತಡ ಹೇರಿ ಎಫ್‌ಐಆರ್ ದಾಖಲಿಸಲಾಗಿತ್ತು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು.

ಈ ಘಟನೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಪ್ರಕರಣದ ರದ್ದತಿ ಕೋರಿ ಆರೋಪಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು.

ಹೈಕೋರ್ಟ್ ತರಾಟೆ ಮತ್ತು ಕಠಿಣ ನಿರ್ದೇಶನ...

ಈ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠವು, ನ್ಯಾಯಾಧೀಶೆ ಗಾಯತ್ರಿ ಅವರ ವರ್ತನೆಯನ್ನು ತೀವ್ರವಾಗಿ ಖಂಡಿಸಿತ್ತು. "ರೋಡ್ ರೇಜ್‌ಗೆ ಸಂಬಂಧಿಸಿದ ವಿಡಿಯೋ ನೋಡಿದರೆ ಮೇಲ್ನೋಟಕ್ಕೆ ಇದು ನ್ಯಾಯಾಂಗ ಅಧಿಕಾರಿಯ ಘನತೆಗೆ ತಕ್ಕಂತಿಲ್ಲ. ಕಾರಿನಿಂದ ಇಳಿದು ಸಾಮಾನ್ಯ ವ್ಯಕ್ತಿಯ ಜೊತೆ ಜಗಳ ತೆಗೆದಿದ್ದಾರೆ" ಎಂದು ನ್ಯಾಯಪೀಠ ಕಟುವಾಗಿ ಟೀಕಿಸಿತ್ತು. ಅಲ್ಲದೆ, ಬಲಿಪಶುಗಳಾದ ಸವಾರರ ಮೇಲೆಯೇ ದೂರು ದಾಖಲಿಸಿಕೊಂಡ ಪೊಲೀಸರ ಕ್ರಮವನ್ನೂ ನ್ಯಾಯಾಲಯ ತೀವ್ರ ತರಾಟೆಗೆ ತೆಗೆದುಕೊಂಡಿತ್ತು.

ಆಡಳಿತಾತ್ಮಕ ವರ್ಗಾವಣೆ ಕುರಿತು...

ಹೈಕೋರ್ಟ್ ರಿಜಿಸ್ಟ್ರಾರ್ ಚಂದ್ರಶೇಖರ ರೆಡ್ಡಿ ಅವರು ಬುಧವಾರ ಅಧಿಸೂಚನೆ ಹೊರಡಿಸಿದ್ದು, ನ್ಯಾಯಾಧೀಶೆ ಗಾಯತ್ರಿ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಬೀದರ್ ಜಿಲ್ಲೆಯ ಹುಮನಾಬಾದ್ ಪ್ರಧಾನ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‌ಸಿ ಕೋರ್ಟ್‌ಗೆ ವರ್ಗಾವಣೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಆಕಾರಂಬದ್ ಪ್ರಕಾರ ಪಹಣಿ ಕಾಲಂ 3 ರಲ್ಲಿ ತಿದ್ದುಪಡಿ ಮಾಡುವ ಕುರಿತು ಕಂದಾಯ ಆಯುಕ್ತರು ಹಾಗೂ ಭೂಮಾಪನ ಆಯುಕ್ತರ ಜಂಟಿ SOP.
05/08/2026

ಆಕಾರಂಬದ್ ಪ್ರಕಾರ ಪಹಣಿ ಕಾಲಂ 3 ರಲ್ಲಿ ತಿದ್ದುಪಡಿ ಮಾಡುವ ಕುರಿತು ಕಂದಾಯ ಆಯುಕ್ತರು ಹಾಗೂ ಭೂಮಾಪನ ಆಯುಕ್ತರ ಜಂಟಿ SOP.

ಪೋಲಿಸರು ಬಹಳ ನಿಷ್ಠಾವಂತರು ಎಂದೇ ನಮ್ಮ ಹೈಕೋರ್ಟ್ ಪೊಲೀಸರಿಗೆ Body worn camera ಕೊಡಲಾಗಿದೆ. ಕರ್ನಾಟಕ ಹೈಕೋರ್ಟ್ ಪೊಲೀಸರ ಭ್ರಷ್ಟಾಚಾರಕ್ಕೆ ...
15/07/2026

ಪೋಲಿಸರು ಬಹಳ ನಿಷ್ಠಾವಂತರು ಎಂದೇ ನಮ್ಮ ಹೈಕೋರ್ಟ್ ಪೊಲೀಸರಿಗೆ Body worn camera ಕೊಡಲಾಗಿದೆ. ಕರ್ನಾಟಕ ಹೈಕೋರ್ಟ್ ಪೊಲೀಸರ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಮತ್ತು ಪಾರದರ್ಶಕತೆ ಕಾಪಾಡಲು ಇಂತಹ ಕ್ಯಾಮೆರಾಗಳನ್ನು ಕಡ್ಡಾಯವಾಗಿ ಬಳಸುವಂತೆ ಸರ್ಕಾರಕ್ಕೆ ಸೂಚನೆಗಳನ್ನು ನೀಡಿದೆ. ಅಲ್ಲದೇ, ಈ ಕ್ಯಾಮೆರಾಗಳು ಆರೋಪಿಗಳ ಮತ್ತು ಸಾರ್ವಜನಿಕರ ನಡುವಿನ ಮಾತುಕತೆಯನ್ನು ಆಡಿಯೋ ಮತ್ತು ವಿಡಿಯೋ ಮೂಲಕ ದಾಖಲಿಸುತ್ತವೆ. ಇದು ಪೊಲೀಸರ ಮೇಲಿನ ಹಲ್ಲೆಯನ್ನು ತಡೆಯಲು ಮತ್ತು ಸುಳ್ಳು ಆರೋಪಗಳಿಂದ ರಕ್ಷಣೆ ಪಡೆಯಲು ಸಹಾಯ ಮಾಡುತ್ತದೆ. ಹಾಗಾಗಿ ಪೊಲೀಸ್ ಇಲಾಖೆಯ ಆದೇಶದ ಪ್ರಕಾರ ಅಧಿಕಾರಿಗಳಿಗೆ ಕ್ಯಾಮೆರಾಗಳನ್ನು ನೀಡಿದ್ದರೆ, ಅವರು ಕರ್ತವ್ಯದ ಸಮಯದಲ್ಲಿ ಅದನ್ನು ಕಡ್ಡಾಯವಾಗಿ ಆನ್ (ಸಕ್ರಿಯ) ಇಟ್ಟುಕೊಳ್ಳಬೇಕು. ಆರೋಪಿಗಳನ್ನು ಬಂಧಿಸುವಾಗ ನಡೆಯುವ ಘಟನೆಗಳನ್ನು ಇದು ನಿಖರವಾಗಿ ರೆಕಾರ್ಡ್ ಮಾಡುತ್ತದೆ.

ಈಗ ವಿಷಯ ಏನಪ್ಪಾ ಅಂದರೆ ಪೊಲೀಸರ ಮೇಲೆ ಹಲ್ಲೆ ಮಾಡಿದ ಅಂತ ಖೈದಿ ಕಾಲಿಗೆ ಗುಂಡು ಹೊಡೆದದ್ದು 'ಬಾಡಿ ವೋರ್ನ್‌ ಕ್ಯಾಮೆರಾ' ದಲ್ಲಿ ರೆಕಾರ್ಡ್ ಆಗಿರಲೇಬೇಕಲ್ವಾ..?
ಆ ಖೈದಿ ನಿಜವಾಗಿಯೂ ಪೊಲೀಸರ ಮೇಲೆ ಹಲ್ಲೆ ಮಾಡಿದ್ದು ಸತ್ಯನಾ ಅಥವಾ ಸುಳ್ಳಾ ಅಂತ ಗೊತ್ತಾಗಬೇಕಲ್ಲವೇ..!

ಮಾನವ ಹಕ್ಕುಗಳ ಆಯೋಗವು ಈ ಕುರಿತು ಸಮಗ್ರ ತನಿಖೆಗೆ ಮಾಡಬೇಕು.

ರಾಜ್ಯದಲ್ಲಿ ನೂತನವಾಗಿ ಸ್ಥಾಪಿಸಲಾಗುತ್ತಿರುವ "ಪ್ರಜಾಸೇವಾ ಇಲಾಖೆ" ಸ್ಥಾಪನೆಯ ಬಗ್ಗೆ.
25/06/2026

ರಾಜ್ಯದಲ್ಲಿ ನೂತನವಾಗಿ ಸ್ಥಾಪಿಸಲಾಗುತ್ತಿರುವ "ಪ್ರಜಾಸೇವಾ ಇಲಾಖೆ" ಸ್ಥಾಪನೆಯ ಬಗ್ಗೆ.

ರಾಜ್ಯಾದ್ಯಂತ ಶಾಶ್ವತ ವಿದ್ಯುತ್ ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಸಿರುವ/ತಾತ್ಕಾಲಿಕ ವಿದ್ಯುತ್ ಸಂಪರ್ಕ ಪಡೆದು ಕಟ್ಟಡ ನಿರ್ಮಿಸಿರುವ ಪ್ರಕರಣಗಳಿಗೆ ...
23/06/2026

ರಾಜ್ಯಾದ್ಯಂತ ಶಾಶ್ವತ ವಿದ್ಯುತ್ ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಸಿರುವ/ತಾತ್ಕಾಲಿಕ ವಿದ್ಯುತ್ ಸಂಪರ್ಕ ಪಡೆದು ಕಟ್ಟಡ ನಿರ್ಮಿಸಿರುವ ಪ್ರಕರಣಗಳಿಗೆ ಹಾಗೂ ಯಾವುದೇ ವಿದ್ಯುತ್ ಸಂಪರ್ಕ ಪಡೆಯದೇ ಕಟ್ಟಡ ಪೂರ್ಣಗೊಂಡಿರುವ ಪ್ರಕರಣಗಳಿಗೆ ಮಾತ್ರ ಅನ್ವಯಿಸುವಂತೆ ಸ್ವಾಧೀನಾನುಭವ ಪ್ರಮಾಣ ಪತ್ರ ಪಡೆಯುವುದರಿಂದ ವಿನಾಯಿತಿ ನೀಡುವ ಕುರಿತು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಾಭಿಪ್ರಾಯವೇ ಅಂತಿಮ, ಆದರೆ ಇಲ್ಲಿ ಜನಾಭಿಪ್ರಾಯಕ್ಕೆ ಕಿಂಚಿತ್ತೂ ಬೆಲೆಯೇ ಇಲ್ಲ. ಒಂದು ಸಲ ಎಲೆಕ್ಷನ್ ನಲ್ಲಿ ...
19/06/2026

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಾಭಿಪ್ರಾಯವೇ ಅಂತಿಮ, ಆದರೆ ಇಲ್ಲಿ ಜನಾಭಿಪ್ರಾಯಕ್ಕೆ ಕಿಂಚಿತ್ತೂ ಬೆಲೆಯೇ ಇಲ್ಲ. ಒಂದು ಸಲ ಎಲೆಕ್ಷನ್ ನಲ್ಲಿ ಗೆದ್ದರೆ ಮತ್ತೆ ಅವರಿಗೆ ಜನರು ಬೇಕಾಗಿರುವುದು ಮುಂದಿನ ಎಲೆಕ್ಷನ್ ಗೆ #ಅಷ್ಟೇ
ಅಲ್ಲಿಯವರೆಗೂ ಅವರ ಸುತ್ತಮುತ್ತಲೂ ಓಡಾಡಿಕೊಂಡಿರುವ ಚೇಲಾಗಳೇ ಸಾಕು ಅವರಿಗೆ.

ಬಡ್ತಿ ಎಷ್ಟರ ಮಟ್ಟಿಗೆ ಪಾರದರ್ಶಕತೆಯಿಂದ ನಡೆದಿರುತ್ತದೆ ಎಂಬುದು ಯಕ್ಷಪ್ರಶ್ನೆ.
19/06/2026

ಬಡ್ತಿ ಎಷ್ಟರ ಮಟ್ಟಿಗೆ ಪಾರದರ್ಶಕತೆಯಿಂದ ನಡೆದಿರುತ್ತದೆ ಎಂಬುದು ಯಕ್ಷಪ್ರಶ್ನೆ.

ಜನನ ಪ್ರಮಾಣ ಪತ್ರದಲ್ಲಿನ ಸಣ್ಣ ತಪ್ಪುಗಳು ಮಕ್ಕಳ ಭವಿಷ್ಯಕ್ಕೆ ದೊಡ್ಡ ಸಮಸ್ಯೆಯಾಗಬಾರದೆಂಬ ಸದುದ್ದೇಶದಿಂದ.
16/06/2026

ಜನನ ಪ್ರಮಾಣ ಪತ್ರದಲ್ಲಿನ ಸಣ್ಣ ತಪ್ಪುಗಳು ಮಕ್ಕಳ ಭವಿಷ್ಯಕ್ಕೆ ದೊಡ್ಡ ಸಮಸ್ಯೆಯಾಗಬಾರದೆಂಬ ಸದುದ್ದೇಶದಿಂದ.

Address

Bangalore

Website

Alerts

Be the first to know and let us send you an email when ಕಾನೂನು ತಿಳಿ posts news and promotions. Your email address will not be used for any other purpose, and you can unsubscribe at any time.

Shortcuts

Share